ಯಾವ ಕಡೆ ತಿರುಗಿ ಮಲಗಬೇಕೆಂದು ಡಾಕ್ಟರ್ ಗಳು ಹೇಳುತ್ತಾರೊ ಗೊತ್ತಾ??

ನಿದ್ರೆ….ಮನುಷ್ಯನಿಗೆ ಇದಕ್ಕಿಂತ ದೊಡ್ಡ ವರ ಇನ್ನೊಂದಿಲ್ಲ, ಕೆಲಸ ಮಾಡಿ ಸುಸ್ತಾದ ನಂತರ ಬೆಡ್ ಹತ್ತಿ ಮಲಗುವುದರಲ್ಲಿರೊ ಸುಖ ಬೇರಾವುದರಲ್ಲೂ ಇರುವುದಿಲ್ಲ.
ನಿದ್ರೆ ಬರೀ ರಿಲ್ಯಾಕ್ಸ್ ಆಗುವುದಕ್ಕಲ್ಲ ನಮ್ಮ ಶರೀರದಲ್ಲಿ ಯಾವುದೇ ಚಟುವಟಿಕೆಯಿಂದಿರುವುದಕ್ಕೆ ನಿದ್ರೆ ಉಪಯೋಗವಾಗುತ್ತದೆ.ನಾಲ್ಕೈದು ದಿನಗಳ ನಿದ್ರೆ ಇಲ್ಲದೆ ಇದ್ದರೆ ಮನುಷ್ಯನಿಗೆ ಪ್ರಾಣಹಾನಿಯಾಗುವ ಅವಕಾಶವಿರುತ್ತದೆ‌.

ಅಸಲಿಗೆ ನಮ್ಮ ಶರೀರಕ್ಕೆ/ದೇಹಕ್ಕೆ ಗಾಳಿ ನೀರು, ಆಹಾರ ತೆಗೆದುಕೊಳ್ಳುವುದು ಎಷ್ಟು ಅವಶ್ಯಕತೆಯೋ ನಿದ್ರೆ ಕೂಡ ಅಷ್ಟೇ ಅವಶ್ಯಕತೆಯಿದೆ. ಹಾಗಾದರೆ ನಾವು ನಿದ್ರೆ ಮಾಡುವ ವಿಧಾನ ಕೂಡ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ನಾವು ಮಲಗಿದರೆ ಮಾಮೂಲಿಯಾಗಿ ಮಲಗುವುಗಿಲ್ಲ. ಆ ಕಡೆ ತಿರುಗಿ, ಈ ಕಡೆ ತಿರುಗಿ ಬೆಡ್ಡೆಲ್ಲ ಚಕ್ಕರ್ ಹೊಡೆಯುತ್ತಿರುತ್ತೇವೆ ಅಸಲು ಮಲಗುವಾಗ ಸ್ಟ್ರೇಯ್ಟ್ ಆಗಿ ಮಲಗಬೇಕು ಇಲ್ಲಾ ಒಂದು ಕಡೆ ತಿರುಗಿ ಮಲಗಬೇಕು. ಯಾವ ಕಡೆ ತಿರುಗಿ ಮಲಗಬೇಕೊ ತಿಳಿದುಕೊಳ್ಳೋಣ…ಮಲಗುವ ಸಮಯದಲ್ಲಿ ಒಂದು ಕಡೆ ತಿರುಗಿ ಮಲಗುವ ಅಭ್ಯಾಸವಿದ್ದರೆ ಎಡಕ್ಕೆ ತಿರುಗಿ ಮಲಗುವುದು ಒಳ್ಳೆಯದು, ಎಂದು ಡಾಕ್ಟರ್ ಗಳು ಹೇಳುತ್ತಾರೆ.

ಎಡಕ್ಕೆ ತಿರುಗಿ ಮಲಗುವುದರಿಂದ ಎದೆಯ ಮೇಲೆ ಒತ್ತಡ ಬಿದ್ದು ಅದು ಚುರುಕಾಗಿ ಕೆಲಸ ಮಾಡುತ್ತದೆ.ಎದೆಯ ಮೇಲ್ಭಾಗದಲ್ಲಿರುವ ಲಿಂಫಾಟಿಕ್ ಸಿಸ್ಟಂ ಚುರುಕಾಗಿ ಕೆಲಸ ಮಾಡುತ್ತದೆ.ಇದರ ಕೆಲಸ ನಮ್ಮ ಶರೀರದಲ್ಲಿರುವ ಹಾನಿಕಾರಕ ಟಾಕ್ಸಿನ್ ಗಳನ್ನು ಹೊರಹಾಕುವುದು.

ಎಡಗಡೆ ಮಲಗುವುದರಿಂದ ಯಾವುದೇ ತೊಂದರೆಯಿಲ್ಲದೆ ಕಾರ್ಯ ನೆರವೇರಿಸುತ್ತದೆ.ಶರೀರಕ್ಕೆ ಹಾನಿಕಾರಕ ಟಾಕ್ಸಿನ್ ಪದಾರ್ಥಗಳನ್ನು ಮಲಮೂತ್ರದ ಮೂಲಕ ಆಚೆ ಕಳಿಸುತ್ತದೆ.
ಅದಲ್ಲದೆ ನಿಮಗೆ ಬಲಗಡೆ ತಿರುಗಿ ಮಲುಗುವ ಅಭ್ಯಾಸವಿದ್ದರೆ ಆದಷ್ಟು ಬೇಗ ಬದಲಾಯಿಸಿಕೊಳ್ಳುವುದು ಒಳ್ಳೆಯದು.

ಯಾಕೆಂದರೆ ಬಲಗಡೆ ತಿರುಗಿ ಮಲಗುವುದರಿಂದ ಆ ಲಿಂಫಾಟಿಕ್ ಸಿಸ್ಟಂ ಸರಿಯಾಗಿ ಕೆಲಸ ಮಾಡದಿರುವ ಅವಕಾಶಗಳಿರುತ್ತವೆ ಅದಕ್ಕೆ ಸ್ಟ್ರೈಟಾಗಿ ಮಲಗಬೇಕು ಇಲ್ಲಾ ಎಡಕ್ಕೆ ತಿರುಗಿ ಮಲಗುವುದರಿಂದ ಆರೋಗ್ಯಕ್ಕೆ ಒಳ್ಳೆಯದು.ಹೇಗೆ ಮಲಗಿ, ಎಲ್ಲಿಯೇ ಮಲಗಿನಮ್ಮ ಶರೀರಕ್ಕೆ ನಿದ್ರೆ ತುಂಬಾ ಅವಶ್ಯಕತೆಯಿದೆ. ಅದನ್ನು ನಿರ್ಲಕ್ಷಿಸುವುದು ಅಷ್ಟು ಒಳ್ಳೆಯದಲ್ಲ…