ನಿಮ್ಮ ಕುತ್ತಿಗೆ ನೋವನ್ನು ಕ್ಷಣದಲ್ಲೇ ನಿವಾರಿಸಲ್ಲು ಸಹಾಯ ಮಾಡುವ ಸಹಜವಾದ ಪದಾರ್ಥಗಳು…..

ಟೆಕ್ನಾಲಜಿ ನಮ್ಮ ಜೀವನವನ್ನು ಸುಲಭಗೊಳಿಸಿದೆ. ನಮ್ಮ ದಿನ ನಿತ್ಯದ ಕೆಲಸವನ್ನು ಹೆಚ್ಚು ಕಂಪ್ಯೂಟರ್ಗಳು ಆಟೋಮ್ಯಾಟಿಕ್ ಆಗಿ ನಡೆಯುತ್ತದೆ. ನಮ್ಮ ಕೆಲಸವನ್ನು ಅರಾಮಾಗಿ ಮಾಡಲು ಸ್ಮಾರ್ಟ್ ಫೋನ್ ಗಳು ಮತ್ತು ಲ್ಯಾಪ್‌ಟಾಪ್ ಗಳ ಹಾಗೆ ಸುಲಬವಾಗಿವೆ.

ಆದರೆ ಟೆಕ್ನಾಲಜಿ ಅದನ್ನು ನಮ್ಮ ಸ್ವಂತ ಸಮಸ್ಯೆಗಳಾಗಿ ನಮ್ಮ ಮುಂದಿದೆ. ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಸ್ರ್ಕೀನ್ ನಲ್ಲಿ ಕಾಣಿಸುವ ದೃಶ್ಯಗಳನ್ನು ನಿರಂತರವಾಗಿ ನೋಡುತ್ತಿದ್ದರೆ, ನಿಮ್ಮ ಕಣ್ಣುಗಳು ದೊಡ್ಡದಾಗಿ, ಹಾಗೂ ಕಣ್ಣಿನ ದೃಷ್ಟಿ ಮಂದವಾಗಿ ಮಾಡಬಹುದು. ಹೀಗೆ ನಮ್ಮ ದೃಷ್ಟಿಯನ್ನೆ ಅಲ್ಲದೇ, ನಮ್ಮ ಕುತ್ತಿಗೆಯ ಮೇಲೆ ಪ್ರಭಾವ ಬೀರುತ್ತದೆ.ಇದು ಕುತ್ತಿಗೆ ನೋವಿನಿಂದ,” ಗಂಟಲು-ನೋವಿಗು ಕಾರಣವಾಗುತ್ತದೆ “.ನಮ್ಮ ಕುತ್ತಿಗೆ ತುಂಬಾ ಮೃದುವಾದದು, ಅದಕ್ಕೆ ಹೆಚ್ಚು ಶ್ರಮ ಹಾಗು ಒತ್ತಡಕ್ಕೆ ಒಳಗಾಗುತ್ತದೆ. ತಲೆ ಮೇಲೆ ಹೆಚ್ಚು ಬಾರ ಹೊರುತಿದ್ದರೆ ಕುತ್ತಿಗೆ ಮೇಲೆ ಪ್ರಭಾವ ಬೀರುತ್ತದೆ. ಅದರ ಎಲುಬುಗಳ ನಡುವೆ ಮೂಳೆಯ ಖನಿಜಾಂಶಗಳು ಅದಕ್ಕೆ ಸಂಬಂಧಿಸಿದ ನರಗಳ ಹಾಗೂ ಇತರೆ ಸಮಸ್ಯೆಗಳು ಬರುತ್ತವೆ.

ನಮ್ಮ ಕುತ್ತಿಗೆಯ ಮಾಂಸಗಳು ವಿಶ್ರಾಂತಿ ತಗೆದುಕ್ಕೊಳ್ಳಲ್ಲಿಲ್ಲವೆಂದರೆ, ಅದು ತುಂಬ ನೋವಿಗೆ ಕಾರಣವಾಗುತ್ತದೆ. ಇದಕ್ಕೆ ಕಾರಣ ಅಸೌಕರ್ಯವಾದ ಭಂಗಿಯಲ್ಲಿ ಕುತ್ತಿಗೆಯನ್ನು ಕೆಲ ಸಮಯ ಇಡುವುದರಿಂದ ನೋವಿಗೆ ಕಾರಣವಾಗುತ್ತದೆ, ವಿವಿಧ ಬಾಗೆಯಾಗಿ ದಿಂಬಿನ ಮೇಲೆ ಮಲಗಿದಾಗ, ಹೆಚ್ಚು ಸಮಯ ಕಂಪ್ಯೂಟರ್, ಮೊಬೈಲ್ ಫೋನ್ಗಳ ಡಸ್ಪ್ಲೆ ಹೆಚ್ಚು ಸಮಯ ನೋಡುವುದರಿಂದಲೂ ಬರಬಹುದು. ಸರಿಇಲ್ಲದ ರಸ್ತೆಯಲ್ಲಿ ಪ್ರಯಾಣಿಸಿದರು ಕುತ್ತಿಗೆ ನೋವು ಬರಬಹುದು.

ಕುತ್ತಿಗೆ ನೊವು ತುಂಬಾ ಅಸೌಕರ್ಯವಾಗಿರುತ್ತದೆ ಮತ್ತು ಅದರಿಂದ ಪರಿಹಾರ ಹೊಂದುವುದು ಅತ್ಯವಶ್ಯ. ಈ ನೋವನ್ನು ನಿವಾರಿಸಲು ಹಲವು ಮುಲಾಮು, ಮಾತ್ರೆಗಳಿವೆ, ಆದರೆ ಆ ನೋವಿನಿಂದ ವಿಮುಕ್ತಿ ಹೊಂದಲು ಎರಡು ಶಕ್ತಿಯುತವಾದ ಪದಾರ್ಥಗಳಿವೆ, ಅವು ಆಲಿವ್ ಎಣ್ಣೆ ಮತ್ತು ಉಪ್ಪು, ಇದರ ಬೆರಕೆಯು ನಿಮ್ಮ ಕುತ್ತಿಗೆ ನೋವಿಗೆ ಉಪಶಮನ ನೀಡುತ್ತದೆ.

ನಮ್ಮ ಮನುಷ್ಯರಪಾಲಿಗೆ ಆಲಿವ್‌ ಎಣ್ಣೆ ಅದ್ಬುತವಾದ ವರ. ನಮ್ಮ ಶರೀರಕ್ಕೆ ಆರೋಗ್ಯಕರವಾದುದು ಎಂದು ಭಾವಿಸಲಾಗಿದ. ಹಾಗೆ ನಮ್ಮ ಶರೀರದವು ನೋವುಗಳಿರು ಜಾಗಗಳಲ್ಲಿ ಹಚ್ಚುವುದರಿಂದ ನೋವುಗಳ ನಿವಾರಣೆಗೆ ಕಾರಣವಾಗುತ್ತದೆ.

ಆಸಿಡಿನ್ ನಂತಹ ಔಷಧಿಗಳಲ್ಲಿ ಕಂಡುಬರುವ ರೋಗನಿರೋಧಕಗಳನ್ನು, ಆಲಿವ್ ಎಣ್ಣೆಯಲ್ಲಿ ಇರುತ್ತವೆ. ಇದು ನಮ್ಮ ಶರೀರದ ನೋವುಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಈ ಎಣ್ಣೆ ಕಂಡಗಳನ್ನು ಹದ ಮಾಡಿ ನೋವನ್ನು ಕಡಿಮೆಗೊಳಿಸುತ್ತದೆ. ಆಲಿವ್ ಎಣ್ಣೆಗೆ ಉಪ್ಪು ಸೇರಿದರೆ ಮತ್ತಷ್ಟು ಪ್ರಭಾವ ಬೀರುತ್ತದೆ.

ಉಪ್ಪಿನಲ್ಲಿ, ಮುಖ್ಯವಾಗಿ ಎಪ್ಸಮ್ ಲವಣಗಳು, ನೈಸರ್ಗಿಕ ನೋವು ನಿವಾರಕ. ಮೆಗ್ನೀಸಿಯಮ್ ಸಲ್ಫೇಟ್ ದೇಹದ ನೋವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ಚರ್ಮದಲ್ಲಿ ನೋವನ್ನು ಪತ್ತೆ ಮಾಡಿ ಮತ್ತು ಸಂವೇದನೆಯನ್ನು ಮಿದುಳಿನ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ. ಸ್ನಾಯುವಿನ ವಿಶ್ರಾಂತಿಗಾಗಿ ಸಲ್ಫೇಟ್ ಟಾಕ್ಸಿನ್ ಗಳನ್ನು ಮತ್ತು ಪ್ರೋಟೀನ್ಗಳನ್ನು ಬಿಡುಗಡೆ ಮಾಡುತ್ತದೆ.

ಈ ಎರಡು ಅತ್ಯುತ್ತಮ ಪದಾರ್ಥಗಳ ಸಂಯೋಜನೆಯು ಕುತ್ತಿಗೆ ನೋವನ್ನು ಕಡಿಮೆ ಮಾಡಲು ಅತ್ಯಂತ ಹಳೆಯ ಚಿಕಿತ್ಸಕ ವಿಧಾನವಾಗಿದೆ. ಈ ವಿಧಾನವನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗಿದೆ. ಅದಕ್ಕಾಗಿಯೇ ಇದು ಬಹಳ ಜನಪ್ರಿಯವಾಗಿದೆ.

ಕುತ್ತಿಗೆ ನೋವಿನಿಂದ ನೀವು ಉಪಶಮನ ಪಡೆಯಲು ಕೆಳಗಿನ ಪದಾರ್ಥಗಳನ್ನು ಹೇಗೆ ಬಳಸುವುದು ಇಲ್ಲಿದೆ.

ಬೇಕಾಗಿರುವ ಪದಾರ್ಥಗಳು:
1) ಉಪ್ಪು – 5 ಚಮಚ (ಮುಖ್ಯವಾಗಿ ಎಪ್ಸಮ್ ಉಪ್ಪು)
2) ಆಲಿವ್ ತೈಲ-10 ಚಮಚ
3) ಒಂದು ಕ್ಲೀನ್ ಗಾಜಿನ ಪಾತ್ರೆ

ಮಾಡುವ ವಿಧಾನ: ಮೇಲೆ ತಿಳಿಸಿದ ಪದಾರ್ಥಗಳನ್ನು ಗಾಜಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಮಾಡಿ. ಮಿಶ್ರಣವನ್ನು ಜಾರಿನಲ್ಲಿ ಹಾಕಿ ಮುಚ್ಚಿ, ಈ ಮಿಶ್ರಣವನ್ನು ಕೆಲವು ಗಂಟೆಗಳ ಕಾಲ ಶೀತಲ ಸ್ಥಳಗಳಲ್ಲಿ ಸಂಗ್ರಹಿಸಿ.
ಕೆಲವು ಗಂಟೆಗಳ ನಂತರ, ಅದರ ಬಣ್ಣ ಬದಲಾಗುತ್ತದೆ.

ಈ ಮಿಶ್ರವನ್ನು ಉಪಯೋಗಿಸಿ 2-3 ನಿಮಿಷಗಳ ಕಾಲ ನಿಮ್ಮ ಕುತ್ತಿಗೆಯನ್ನು ಮಸಾಜ್ ಮಾಡಿ. ಇದು ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಒತ್ತಡದ ನೋವು ನಿವಾರಣೆಗೆ ಸಹಾಯ ಮಾಡವುದು. ಈ ಮನೆಯ ಮದ್ದು ಪರಿಹಾರವು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಕುತ್ತಿಗೆ ನೋವು ತ್ವರಿತವಾಗಿ ನಿವಾರಣೆಯಾಗುತ್ತದೆ‌.

ಈ ಮಿಶ್ರಣವನ್ನು ಹಚ್ಚಿ ಕೆಲವೇ ಗಂಟೆಗಳ ನಂತರ ನೋವು ಕಡಿಮೆಯಾದಂತನಿಸಿದರೆ, ಆ ಜಾಗವನ್ನು ಶುದ್ಧವಾದ ಬಟ್ಟೆಯಿಂದ ತೊಳೆಯಿರಿ ಮತ್ತು ಇದರ ಉತ್ತಮ ಫಲಿತಾಂಶವನ್ನು ನೀವು ಪ್ರತಿದಿನ ಪಡೆಯುವಿರಿ. ನೋವು ಕಡಿಮೆಯಾಗುವ ತನಕ ಈ ಮನೆಯ ಮದ್ದು ಉಪಯೋಗಿಸುವುದರಿಂದ ಒಳ್ಳೆಯ ಫಲಿತಾಂಶವಿದೆ.

ಈ ಮನೆ ಮದ್ದಿನ ಬಳಕೆಯ ಕಾರಣದಿಂದ ಕುತ್ತಿಗೆ, ಸ್ನಾಯುಗಳ ನೋವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ…