ಕ್ಯಾಬ್ ಡ್ರೈವರ್ನಿಂದ ಅತ್ಯಾಚಾರಕ್ಕೊಳಗಾದ ಹುಡುಗಿಯೊಬ್ಬರು ಬರೆದ ಪತ್ರ. ನಿಮ್ಮ ಕಣ್ಣಲ್ಲಿ ನೀರು ತರಿಸುತ್ತದೆ.!

ಎಂದಿನಂತೆ ಆಫಿಸ್ ಗೆ ಹೋಗಿ ಹಿಂತಿರುಗಿ ಬರುತ್ತಿದೆ…. ಮಾಡುವುದು ಸಾಪ್ಟ್ ವೇರ್ ಕೆಲಸವಾದ್ದರಿಂದ..ಕೆಲಸ ಮುಗಿಸುವುದು ರಾತ್ರಿ 10 ಗಂಟೆ ದಾಟಿರುತ್ತದೆ. ಆ ಕಡೆ ಹೋಗುತ್ತಿದ್ದ ಕ್ಯಾಬ್ ನಿಲ್ಲಿಸಿ, ಹತ್ತಿದೆ….ಹನಿಗಳು ಬೀಳುತ್ತಿದ್ದ ಕಾರಣ ಕಾರ್ ತುಂಬಾ ಸ್ಲೋಆಗಿ ಹೋಗುತ್ತಿತ್ತು…. ಮೆಡಮ್ ತುಂಬಾ ಚಳಿಯಾಗುತಿದೆ ಒಂದು ಕಾಫಿ ಕುಡಿಯುತ್ತೇನೆ? ಪಕ್ಕದಲ್ಲೇ ಫೇಮಸ್ ಟಿ ಸ್ಟಾಲ್ ಇದೆ ಅಲ್ಲಿ ನಿಲ್ಲಿಸುತ್ತೇನೆ ಎಂದ ಡ್ರೈವರ್. ಒ ಕೆ ಎಂದೆ ನಾನು. ಕಾರ್ ರಸ್ತೆ ಬದಲಿಸಿತು, ಕಾಡು ಕತ್ತಲೆ ಇರುವ ಪ್ರದೇಶದಲ್ಲಿ ನಿಂತಿತ್ತು..! ಆವರೆಗೂ ನನಗೆ ಅರ್ಥವಾಗಲಿಲ್ಲ… ನಾನು ಮನುಷ್ಯ ಮುಖವಾಡ ಧರಿಸಿದ ಮೃಗದ ಕೈಗೆ ಸಿಕ್ಕಿ ಕೊಂಡಿದ್ದೇನೆ ಎಂದು….ಕಾರ್ ನಿಂತಾಗಿನಿಂದ.‌… ಪ್ರತಿ ಕ್ಷಣ ನನಗೆ ನರಕವನ್ನು ತೋರಿಸಿದ ಆ ಮಾನವ ಮೃಗ. ಅವನ ಬಲವನ್ನೆಲ್ಲ ನನ್ನ ದೇಹದ ಮೇಲೆ ಪ್ರಯೋಗಿಸಿದ‌. ಅಣ್ಣಾ ನಿನ್ನ ತಂಗಿಯಂತವಳು ಎಂದು ಕಾಲು ಹಿಡಿದರೂ..ಅವನು ನನ್ನಲ್ಲಿನ ಸ್ರೀ ತನವನ್ನೇ ಕಂಡನೇ ಹೊರತು ತಂಗಿಯಂತೆ ಕಾಣಲಿಲ್ಲ

ಮೊದಲ ಸಂಬಳದಿಂದ ಖರೀದಿಸಿದ ಬಟ್ಟೆಯನ್ನು…. ಶರೀರದಿಂದ ಹರಿದು ಹಾಕಿದ. ನನ್ನ ಆರ್ತನಾದವು…ಅವನ ಕಿವಿಗಳಿಗೆ ಸ್ವಲ್ಪವೂ ಕೇಳಿಸಲೇ ಇಲ್ಲ… ಅವನ ಪುರುಷತ್ವ, ಅವನ ತಾಯಿ ತಂಗಿ ಬಂಧಗಳು … ಮಾನವೀಯತೆ, ಕರುಣೆ-ದಯೆ ನಂತಹ ಯಾವುದೇ ಮಾನವ ಮೌಲ್ಯಗಳು ನಿಲ್ಲಲಿಲ್ಲ. ಆ ಮೃಗದ ಕಾರಣ ನನ್ನ ದೇಹವು ಮಾಸದ ಹುಣ್ಣಾಗಿದೆ. ಒಬ್ಬ ಹೆಣ್ಣಿನ ಮೈಯನ್ನು ಸಿಗರೆಟ್ ನಿಂದ ಸುಡುವ ದುರಾತ್ಮನಾಗುತ್ತಾನೆ ಎಂದು ಮೊದಲೆ ತಿಳಿದಿದ್ದರೆ ಆ ತಾಯಿ ಹಾಲುಣಿಸುತಿರಲಿಲ್ಲ ಬದಲಿಗೆ ಹುಟ್ಟುತ್ತಲೇ ಕತ್ತು ಹಿಸುಕಿ ಸಾಗಿಸುತ್ತಿದ್ದಳೇನೋ? ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ… ತಪ್ಪಿಸಿಕೊಳ್ಳಲು ಆಗದ ಸ್ರೀ ಬಲಹೀನತೆಯನ್ನು ನೋಡಿ ಅವನು ನಗುತ್ತಾನೆಂದು…ಪರಸ್ತೀಯನ್ನು ತನ
ತನ್ನ ಆಕ್ರಮಣದಿಂದ ಅವನು ಇದನ್ನು ಮಾಡುತ್ತಾನೆ ಎಂದು ಮೊದಲೆ ಗೊತ್ತಿದ್ದರೆ… ಅವನ ತಾಯಿಯು ಚಂದಮಾಮಾ ಬಾ..ಎಂದು ಹಾಡುತ್ತ ತಿನಿಸುವ ಊಟದಲ್ಲಿ ವಿಷ ಸೇರಿಸಿ ಸಾಯಿಸುತ್ತಿದ್ದಳೇನೋ.?

ಹುಲಿ ತನ್ನ ಉಗುರುಗಳಿಂದ ಜಿಂಕೆಯನ್ನು ಬೇಟೆಯಾಡಿದಂತೆ…ಅವನ ಉಗುರುಗಳನ್ನು ಮಹಿಳೆಯ ದೇಹದ ಮೇಲೆ ಚ್ಚುಚ್ಚುತಾನೆಂದು ತಿಳಿದಿದ್ದರೆ…. ಚಿಕ್ಕಂದಿನಲ್ಲೇ ಅವನ ತಾಯಿ ಪಟಕಾರಿಯಿಂದ ಇವನ ಉಗುರುಗಳನ್ನು ಕಿತ್ತು ಹಾಕುತ್ತಿದ್ದಳೇನೋ.?

ನಾಯಿಯಂತೆ ಮೇಲೆ ಬಿದ್ದು… ಮೂತಿ ನೆಕ್ಕುತ್ತಾನೆ ಎಂದು ಮೊದಲೇ ತಿಳಿದಿದ್ದರೆ…. ಇವನ ತಾಯಿ ಇವನ್ನನ್ನು ಸ್ಕೂಲಿಗೆ ಕಳಿಸುವಾಗ ಹಾಕುವ ಬಿಸಿ ಬಿಸಿ ಸೌಟಿನಿಂದ ಮೂತಿ ಮೇಲೆ ಬರೇ ಹಾಕುತ್ತಿದ್ದಳೇನೋ.?

ಬಲವಂತವಾಗಿ ಒಬ್ಬ ಸ್ತ್ರೀ ಶರೀರದ ಮೇಲೆ ರಕ್ಷಸನ ಹಾಗೆ ಬಿಳುತ್ತಾನೆ ಎಂದು ಮೊದಲೇ ತಿಳಿದಿದ್ದರೆ…ಇವನ ತಾಯಿ ಉಯ್ಯಾಲೆಯಲ್ಲಿ ತೂಗುವಾಗ ಅಲ್ಲಿಂದ ತಳ್ಳಿ ಪೀಡೆ ತೊಲಗಿತು ಎಂದು ಕೈ ತೊಳೆದುಕೊಳ್ಳುತ್ತಿದ್ದಳ್ಳೇನೋ.?

ಜನ್ಮಸ್ಥಳವನ್ನು.. ಕಾಮಕ್ರೀಡಾ ಸ್ಥಳವಾಗಿ ಪರಿಗಣಿಸಿ ಉಮ್ಮಸ್ಸಿಗೊಳಗಾಗುತ್ತಾನೆಂದು ಗೊತ್ತಿದ್ದರೆ…ಹೆರುತ್ತಿರಲ್ಲಿಲ್ಲ..ಹುಟ್ಟುವ ಮುನ್ನವೇ ಅವನ ತಾಯಿ ಅವನ್ನನ್ನು ಅಲ್ಲಿದ ಹೊರಗೆ ಬಿಡುತ್ತಿರಲ್ಲಿಲ್ಲ….ಅಬಾಷನ್ ಹೆಸರಲ್ಲಿ ಡಾಕ್ಟರ್ ಗಳು ಕತ್ತಿಗೆ ಬಲಿ ಮಾಡುತ್ತಿದ್ದಳೇನೋ.

ಉಸಿರಾಡಲು ಬಿಡದೆ ಮೇಲೆ ಬಿದ್ದು ಮಾನವನ್ನು ದೋಚುವ ದೌರ್ಬಾಗ್ಯವಂತನಾಗುವನು ಎಂದು ತಿಳಿದಿದ್ದರೆ ಇವನ ತಾಯಿ ಅವನ್ನನ್ನು ಉಸಿರಾಡಲು ಬಿಡದೆ ಈ ರಕ್ಷಸನ್ನನ್ನು ಸಾಯಿಸಿ ಸಂತೋಷಿಸುತ್ತಿದ್ದಳ್ಳು.