ವಿಮಾನ ಗಾಳಿಯಲ್ಲಿ ಹಾರಿದಾಗ ನಿದ್ದೆಹೋದ ಪೈಲಟ್ … ಅಂತಿಮವಾಗಿ ಆ ವಿಮಾನ ಪರಿಸ್ಥಿತಿ ಏನೆಂದು ತಿಳಿದರೆ ಶಾಕ್ ಆಗಬೇಕಾದದ್ದೆ… !!!

ವಿಮಾನ … ಈ ವಿಮಾನ ಎಕ್ಕಾಲಂಟೆ ಸಾಕು ನಮ್ಮಲ್ಲಿ ಅನೇಕ ಆಲೋಚನೆಗಳು, ಭಯಗಳು, ಆತಂಕಗಳು, ಹಲವು ಬಾರಿ ಆ ವಿಮಾನವು ಕುಸಿಯಿತು, ಈ ವಿಮಾನ ಕುಸಿದಿದೆ ಎಂಬ ಹಲವು ಕಥೆಗಳು ನಮ್ಮ ನ್ಯೂಸ್ ಚಾನಲ್ ನಲ್ಲಿ ನೋಡುತಿರುತ್ತೆವೆ, ಆದರೆ ವಾಸ್ತವವಾಗಿ ರಸ್ತೆ ಮೇಲೆ ಅಪಘಾತಗಳಿಗಿಂತ ವಿಮಾನ ಅಪಾಯಗಳು ಸಂಭವಿಸುವ ಸಾಧ್ಯತೆ ಕಡಿಮೆ,

ದಿನಕ್ಕೆ ನೂರು ರಸ್ತೆ ಆಕ್ಸಿಡೆಂಟ್ ನೋಡುತ್ತಿದ್ದರೆ ವರ್ಷಕ್ಕೊ ಎರಡು ವರ್ಷಗಳಲ್ಲಿ ಒಂದು ವಿಮಾನ ಅಪಘಾತ ನೋಡುತ್ತಿರುತ್ತೆವೆ ಅವು ಅಷ್ಟು ಸುರಕ್ಷಿತ, ಕಾರಣ ವಿಮಾನ ತಂತ್ರಜ್ಞಾನ, ಹಾಗೆಯೇ ಅದರ ನಿರ್ವಹಣೆ ಇರುತ್ತದೆ, ಆದರೆ ನೂರಾರು ಪ್ರಾಣವೂ ಕೇವಲ ಪೈಲೆಟ್ ಕೈಯಲ್ಲಿ ಇಟ್ಟು ಗಾಳಿಯಲ್ಲಿ ಹೋಗಬೇಕೆಂದರೆ ಯಾರಿಗಾದರೂ ಭಯವೇ, ಅದೇ ವಿಮಾನ ಗಾಳಿಯಲ್ಲಿ ಹಾರಿದ ಕೂಡಲೇ ಪೈಲೆಟ್ ನಿದ್ದಹೋದನು ಎಂದರೆ ಹೃದಯ ಜಾರಿ ಹೋಗುತ್ತದೆ ಅಲ್ಲವೇ….? ಪೈಲೆಟ್ ಮಲಗಿದರೆ ಏನಾಗುತ್ತದೆ…?

ಪೈಲಟ್ಗಳು ಸಹ ಮನುಷ್ಯರೆ ಅಲ್ಲವೇ …? ಅವರಿಗೂ ಕೂಡ ನಿದ್ದೆ ಬರುತ್ತದಲ್ಲವೇ …? ಒಂದೊಂದು ಬಾರಿ ಪೈಲೆಟ್ ಗಳು 16 ಗಂಟೆಗಳಿಗೂ ಹೆಚ್ಚು ಕಾಲ ಡ್ಯೂಟಿ ಮಾಡಬೇಕಾದ ಅವಶ್ಯಕತೆ ಬರುತ್ತದೆ, ಅಂತಹ ಸಮಯದಲ್ಲಿ ಮಾನವ ಮಾತ್ರರೂ ನಿದ್ದೆ ಮಾಡಬೇಕೆಂಬ ಆಲೋಚನೆ ಬರುತ್ತದೆ, ಅದಕ್ಕಾಗಿ ಪೈಲೆಟ್ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ, 15 ರಿಂದ 30 ನಿಮಿಷಗಳ ಕಾಲ ನಿದ್ದೆ ಮಾಡುತ್ತಿರುತ್ತಾರೆ, ಮತ್ತು ಆ ಸಮಾಯದಲ್ಲಿ ವಿಮಾನದ ಪರಿಸ್ಥಿತಿ ಏನು….? ವಾಸ್ತವವಾಗಿ, ಎಲ್ಲಾ ವಿಮಾನಗಳು ಸ್ವಯಂಚಾಲಿತವಾಗಿ ಹಾರುವ ಸಾಮರ್ಥ್ಯ ಹೊಂದಿವೆ, ಆದರೆ ಅನೇಕ ಪ್ರವಾಸಗಳು ಇನ್ನೂ ಕಂಪ್ಯೂಟರ್ ಪ್ರೋಗ್ರಾಂನಲ್ಲಿ ಇಲ್ಲ, ಪೈಲೆಟ್ ಗಳ ಮೇಲೆ ಆಧಾರಿತವಾಗಿವೆ.

ಆದರೆ ವಿಮಾನದಲ್ಲಿ ಕೇವಲ ಒಂದು ಪೈಲೆಟ್ ಮಾತ್ರ ಇರುವುದಿಲ್ಲ, ವಿಮಾನವನ್ನು ಎರಡು ಪೈಲೆಟ್ ಗಳು ಸೇರಿ ನಡೆಸುತ್ತಾರೆ, ಹಿರಿಯ ಪೈಲಟ್ನೊಂದಿಗೆ ಮತ್ತೊಂದು ಸಹ-ಪೈಲಟ್ ಇರುತ್ತಾರೆ, ಅವರು 30 ನಿಮಿಷಗಳ ವಿರಾಮದಲ್ಲಿ ವಿಶ್ರಾಂತಿ ಪಡೆಯುತ್ತಾರೆ, ಒಬ್ಬ ಪೈಲೆಟ್ ಮಲಗಿದ್ದಾಗ, ಯಾವುದೇ ಸಮಸ್ಯೆ ಸಂಭವಿಸಿದಲ್ಲಿ ಮತ್ತೊಂದು ಪೈಲಟ್ ವಿಮಾನದ ನಿಯಂತ್ರಣವನ್ನು ತೆಗೆದುಕೊಳ್ಳುತ್ತಾರೆ, ಯಾವುದಾದರೂ ಸಮಸ್ಯೆ ಬಂದಲ್ಲಿ ಮಲಗಿರುವ ಪೈಲೆಟ್ ಅನ್ನು ಎಚ್ಚರಿಸಲಾಗುತ್ತದೆ‌.

ಹಾಗೆಯೇ ಪೈಲಟ್ಗಳಿಗೆ ಒದಗಿಸುವ ಆಹಾರದಲ್ಲಿ ಕೂಡಾ ಹೆಚ್ಚು ಜಾಗ್ರತೆ ವಹಿಸುತ್ತಾರೆ, ಇಬ್ಬರೂ ಪೈಲೆಟ್ ಗೂ ಒಂದೇ ಬಗೆಯ ಆಹಾರವನ್ನು ಕೊಡುವುದಿಲ್ಲ, ಆದರೆ ವಿವಿಧ ಆಹಾರಗಳನ್ನು ವಿಭಿನ್ನ ಸಮಯಗಳಲ್ಲಿ ನೀಡಲಾಗುತ್ತದೆ ಏಕೆಂದರೆ ಆಹಾರವು ವಿಷವಾಗಿದ್ದರೆ ವಿಮಾನವನ್ನು ಸುರಕ್ಷಿತವಾಗಿ ಮತ್ತೊಂದು ಪೈಲಟ್ನೊಂದಿಗೆ ಇಳಿಸಬಹುದು.