ಅವಳು ಮಾಡಿದ್ದ ಚಿಕ್ಕ ತಪ್ಪು ಅವಳನ್ನು ಅಂದ ಹೀನವಾಗಿ ಮಾಡಿದೆ! ಅಷ್ಟಕ್ಕೂ ಆಕೆ ಮಾಡಿದ ತಪ್ಪೇನೆಂದರೆ !

ಏನಾದರೂ ಆರೋಗ್ಯ ಸಮಸ್ಯೆಗಳು ಬಂದಾಗ ನಾವು ವೈದ್ಯರನ್ನು ಭೇಟಿ ಮಾಡಲು ತುಂಬಾ ಸಮಯ ತಗೆದುಕೊಳ್ಳುತ್ತೇವೆ. ಇದು ಕೆಲವು ದಿನಗಳಿಗೆ ಸರಿ ಹೋಗುತ್ತದೆ ಎಂದು ನಿರ್ಲಕ್ಷಿಸುತ್ತಾರೆ… ಆದರೆ ಹಾಗೆ ಮಾಡುವ ಸಣ್ಣ ತಪ್ಪಿನಿಂದ ಕೊನೆಗೆ ಅದು ದೊಡ್ಡ ಸಮಸ್ಯೆಯಾಗುತ್ತದೆ. ಆ ನಂತರ ಹೆಚ್ಚಿನ ಪರಿಣಾಮ ಎದುರಿಸಬೇಕಾಗುತ್ತದೆ. ಥಾಯ್ ಲ್ಯಾಂಡ್ ಗೆ ಸೇರಿದ ಜೆನ್ನಿಯ ಪರಿಸ್ಥಿತಿ ಈಗ ಹಾಗೆ ಆಗಿದೆ.

2015 ರಲ್ಲಿ ಜೆನ್ನಿಗೆ ದಂತದಲ್ಲಿ ನೋವು ಪ್ರಾರಂಭವಾಗುತ್ತದೆ. ಆ ಸಮಯದಲ್ಲಿ ನೋವಿನ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಜೆನ್ನಿ .. ಏನೋ ಸ್ವಲ್ಪ ದಿನಗಳ ನಂತರ ಹೊರಟುಹೋಗುತ್ತದೆ ಎಂದು ಭಾವಿಸಿದಳು. ಆದರೆ ಆ ನೋವು ದಿನ ದಿನಕ್ಕೆ ಹೆಚ್ಚಾಗಲು ಪ್ರಾರಂಭವಾಗಿದೆ. ಸುಮಾರು ಒಂದು ವರ್ಷ ನಂತರ ಜೆನ್ನಿ ವೈದ್ಯರ ಬಳಿ ಹೋದರು.

ಯಾವ ನೋವನ್ನು ಅವಳು ನಿರ್ಲಕ್ಷಿಸಿದಳೋ .. ಅದು ಮಾಮೂಲಿ ನೋವಲ್ಲ. ವೈದ್ಯರು ದಕ್ಷಿಣ ಕೊರಿಯಾದಲ್ಲಿನ ವೈದ್ಯರನ್ನು ಶಿಫಾರಸು ಮಾಡಿದರು. ಅವಳ ದಂತಗಳಲ್ಲಿ ಇರುವುದು ಒಂದು ಟ್ಯೂಮರ್ ಎಂದು ತಿಳಿಸಿದರು. ಇದು ಟರ್ಮಿನಲ್ ಕ್ಯಾನ್ಸರ್ ರೂಪದಲ್ಲಿದೆ. ಈಗ ಅವಳ ಮುಖದಲ್ಲಿ ಬಹಳ ವ್ಯತ್ಯಾಸ ಕಾಣುತ್ತಿದೆ. ತನ್ನ ಸ್ನೇಹಿತರು ತನ್ನ ಮುಖವನ್ನು ನೋಡಿ ಭಯ ಪಡುತ್ತಿದ್ದಾರೆ ಎಂದು ಜೆನ್ನಿ ಹೇಳಿದ್ದಾರೆ. ಈವರೆಗೆ ಅವಳು ಆರು ಬಾರಿ ಕೀಮೋ ಥೆರಪಿ ನಿರ್ವಹಿಸಿದ್ದಾರೆ. ಅವಳ ದೇಹದಲ್ಲಿ ಟ್ಯೂಮರ್ ಗಾತ್ರ ಹೆಚ್ಚಾಗುತ್ತಿದೆ. ಅವಳು ಅವಳ ಮೂಗು.. ಕಣ್ಣುಗಳ ಮೇಲೆ ಸಹ ತೀವ್ರ ಪರಿಣಾಮ ಬೀರುತ್ತಿದೆ.