ನೋಟ್ ಬುಕ್ ಗೋಸ್ಕರ ಸ್ಕೂಲ್ ಬ್ಯಾಗ್ ಒಳಗೆ ಕೈ ಇಟ್ಟ ವಿದ್ಯಾರ್ಥಿಗೆ..ಅದು ನೋಡಿ !

ತೆಲಂಗಾಣದಲ್ಲಿನ ಜಗಿತ್ಯಾಲ ಜಿಲ್ಲೆಯ ಮಲ್ಯಾಲ ಪಂಚಾಯತ್ ಗೆ ಸೇರಿದ ಲಂಬಾಡಿಪಲ್ಲಿಯ ವಿದ್ಯಾರ್ಥಿಯಾದ ಪ್ರವೀಣ್ ಎಂಟನೆ ತರಗತಿಯಲ್ಲಿ ಓದುತ್ತಿದ್ದಾನೆ. ಲಂಬಾಡಿಪಲ್ಲಿಯ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾನೆ.

ಎಂದಿನಂತೆ… ಶನಿವಾರ ಬೆಳಗ್ಗೆ ಸ್ಕೂಲ್ ಬ್ಯಾಗ್ ಅನ್ನು ಬುಜಕ್ಕೆ ಹಾಕಿಕೊಂಡು ಸ್ನೇಹಿತರೊಂದಿಗೆ ಶಾಲೆಗೆ ಹೋದನು. ತನ್ನ ಸ್ಕೂಲ್ ಬ್ಯಾಗ್ ನಲ್ಲಿ ನಾಲ್ಕು ಅಡಿಯ ನಾಗರ ಹಾವು ಇರುವ ವಿಷಯ ಆವನಿಗೆ ಆ ಸಮಯಕ್ಕೆ ತಿಳಿದಿರಲಿಲ್ಲ.

ಕ್ಲಾಸ್ರೂಮ್ಗೆ ಹೋದ ನಂತರ ನೋಟ್ಬುಕ್ಗಾಗಿ ಬ್ಯಾಗ್ನಲ್ಲಿ ಕೈ ಹಾಕಿದನು. ಮೆತ್ತಗೆ ಕೈಗೆ ತಾಗಿದೆ ಹಾವು. ಆಶ್ಚರ್ಯಪಡುತ್ತ..ಬ್ಯಾಗ್ ನಲ್ಲಿ ಬಗ್ಗಿ ನೋಡಿದರೆ .. ಜುರುಜುರು ಎನ್ನುತ್ತಾ ತೆವಳುತ್ತ ಹೊರಬಂದಿದೆ ನಾಗರಹಾವು.

ಇದು ಅನಿರೀಕ್ಷಿತ ಘಟನೆ. ಬೆಚ್ಚಿ ಬಿದ್ದ ಪ್ರವೀಣ್ ಮತ್ತು ಅವನ ಸ್ನೇಹಿತರು ಕ್ಲಾಸ್ ರೂಂನಲ್ಲಿ ಓಡಲಾರಂಬಿಸಿದರು. ಭಯದಿಂದ ಕ್ಲಾಸ್ ರೂಂನಿಂದ ಹೊರಗೆ ಓಡಿದರು.

ಅಲ್ಲೇ ಇದ್ದ ಶಾಲಾ ಸಿಬ್ಬಂದಿ, ಸ್ಥಳೀಕರು ಹಾವನ್ನು ಸಾಯಿಸಿದರು. ವಿದ್ಯಾರ್ಥಿ ಮನೆಯೊಳಗೆ ಹಾವು ಬ್ಯಾಗೊಳಕ್ಕೆ ತೂರಿರಬಹುದು ಎಂದು ಅನುಮಾನಿಸುತಿದ್ದಾರೆ. ಈ ಘಟನೆಯಿಂದ ಯಾರಿಗೂ ಯಾವುದೇ ಅಪಾಯವಾಗದ ಕಾರಣದಿಂದಾಗಿ ಎಲ್ಲರೂ ಉಸಿರು ತಗೆದುಕೊಂಡರು.