ಈ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ನೆಗಟೀವ್ ಎನರ್ಜಿ … ತಕ್ಷಣ ತಗೆದುಹಾಕಿ

ಮನೆಯ ಸುತ್ತಲೂ ಪಕ್ಕದ ವಾಸ್ತು ಸರಿಯಾಗಿ ಇಲ್ಲದಿದ್ದರೆ ಒಳ್ಳೆಯದು ನಡೆಯುವುದಿಲ್ಲ ಎಂದು ಹೆಚ್ಚು ಜನ ನಂಬುತ್ತಾರೆ. ಮನೆಯೊಳಗೆ ವಾಸ್ತು ಎಷ್ಟು ಮುಖ್ಯವಾಗಿದೆಯೊ ಮನೆಯಲ್ಲಿ ನಕಾರಾತ್ಮಕ ಶಕ್ತಿ ಬರುವ ವಸ್ತುಗಳು ಇಲ್ಲದ ಹಾಗೆ ನೋಡಿಕೊಳ್ಳುವುದು ಕೂಡಾ ಮುಖ್ಯವಾಗಿದೆ. ಈಗ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೀಡಿರುವ ವಸ್ತುಗಳು ಏನೆಂದು ಒಮ್ಮೆ ತಿಳಿದುಕೊಳ್ಳೊಣ.

ನಾವು ಮನೆಯ ಗೋಡೆಯ ಮೇಲೆ ಒಡೆದಿರುವ ಫ್ರೇಮ್ ಗಳು ಇರಬಾರದಂತೆ, ಅವುಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಬರುತ್ತದೆಯಂತೆ. ಅಲ್ಲದೆ ಒಡೆದಿರುವ ದೇವತೆಗಳು, ದೇವತೆಗಳ ವಿಗ್ರಹಗಳು ಸಹ ಮನೆಯಲ್ಲಿ ಇರಬಾರದು ಏಕೆಂದರೆ ಅಂತಹ ಪ್ರತಿಮೆಗಳು ಮನೆಯಲ್ಲಿ ಇದ್ದರೆ ನಮಗೆ ಒಳ್ಳೆಯದಾಗುವುದಿಲ್ಲವಂತೆ, ಅದಕ್ಕಾಗಿಯೇ ಮನೆಯಲ್ಲಿರುವ ಒಡೆದ ವಸ್ತುಗಳನ್ನು ತಗೆದುಹಾಕಿ.

ನಿಮ್ಮ ಮನೆಯಲ್ಲಿ ಕೆಲಸ ಮಾಡದೆ ಇರುವ ಗಡಿಯಾರ (ಗೋಡೆಗೆ ಹಾಕುವುದು, ಕೈಗೆ ಕಟ್ಟುವುದು ಯಾವುದಾದರೂ ಸರಿ) ಇದ್ದರೆ…. ಒಡೆದು ಹೋದ ಗಡಿಯಾರ ಇದ್ದರೆ ತಕ್ಷಣ ತಗೆದುಹಾಕಿ. ಅವು ಮನೆಗೆ ವಾಸ್ತು ದೋಷ ತರುತ್ತದೆ. ಅಷ್ಟೇ ಅಲ್ಲದೇ ಮುರಿದ ಬಾಗಿಲುಗಳು, ಬಣ್ಣ ಹಾಕದೇ ಉಳಿದ ಬಾಗಿಲುಗಳು ಮತ್ತು ಗೋಡೆಗಳು ಇರಬಾರದು. ಹಾಗಿದ್ದಲ್ಲಿ, ಲಕ್ಷ್ಮಿ ದೇವಿ ಒಲಿಯುತ್ತಾಳೆ. ಅದಕ್ಕಾಗಿ ಅವುಗಳನ್ನು ದುರಸ್ತಿ ಮಾಡಬೇಕಾಗಿದೆ.

ಒಡೆದಿರುವ ಗಾಜು ಮತ್ತು ಪಿಂಗಾಣಿ ಸರಕುಗಳು ಮನೆಯಲ್ಲಿರುವುದು ಉತ್ತಮವಲ್ಲ, ಮತ್ತು ಅವು ನಕಾರಾತ್ಮಕ ಶಕ್ತಿ ಮನೆಯೊಳಕ್ಕೆ ಬರುತ್ತದೆಯಂತೆ.ಮುರಿದ ಪೀಠೋಪಕರಣಗಳು ಮನೆಯಲ್ಲಿ ಇರುವಂತಿಲ್ಲ. ಇದು ಮನೆಯೊಳಗೆ ಬರುವ ಸಕಾರಾತ್ಮಕ ಶಕ್ತಿಯನ್ನು ಬರದಂತೆ ಮಾಡುತ್ತದೆ.

ಮುರಿದ ಕನ್ನಡಿಗಲನ್ನು ಮನೆಯಿಂದ ದೂರವಿಡಬೇಕು. ಮುರಿದ ಕನ್ನಡಿಗಳಿಂದ ಪ್ರತಿಕೂಲ ಶಕ್ತಿಗಳು ಮನೆಯೊಳಗೆ ಬರುತ್ತವೆ. ಅದಕ್ಕಾಗಿಯೇ ಅವುಗಳನ್ನು ಮನೆಯಿಂದ ಹೊರಹಾಕುವುದು ಒಳ್ಳೆಯದು. ಮನೆಯಲ್ಲಿ, ಕೆಲಸ ಮಾಡದ ವಿದ್ಯುತ್ ಸರಕುಗಳನ್ನೂ ಇಡಬೇಡಿ. ನಕಾರಾತ್ಮಕ ಶಕ್ತಿ ಅವರೊಂದಿಗೆ ಹರಡುತ್ತದೆ. ಇಂಕ್ ಮುಗಿದಿರುವ ರೀಪಿಲ್, ಬರೆದು ಮುಗಿದಿರುವ ಪೆನ್ಸಿಲ್ ಗಳು, ಶಾರ್ಪನರ್, ಎರೇಜರ್ ಗಳು, ಅಂತಹ ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಅವುಗಳಿಂದ ನಕಾರಾತ್ಮಕ ಶಕ್ತಿ ಹರಡುತ್ತದೆ.

ಇವುಗಳನ್ನು ಸರಿಯಾಗಿ ಪಾಲಿಸಿದರೆ ನಕಾರಾತ್ಮಕ ಶಕ್ತಿಯನ್ನು ತಪ್ಪಿಸುವುದಷ್ಟೇ ಅಲ್ಲದೇ ಮನೆಗಳನ್ನು ಸ್ವಚ್ಛವಾಗಿಡಲು ಮತ್ತು ನೋಡಲು ಸಂತೋಷವಾಗುತ್ತದೆ.