ಆ ಡಾಕ್ಟರ್ ಫೀಸ್ 20 ರೂಪಾಯಿಗಳು…. ಕೊನೆಗೆ ಆ ಡಾಕ್ಟರ್ ಸಂಪಾದಿಸಿದ ಆಸ್ತಿ ಮಾತ್ರ….

ಡಾಕ್ಟರ್ ದೇವರಿಗೆ ಸಮಾನ ಎನ್ನುತ್ತಾರೆ. ಕೊಯಂಬತ್ತೂರಿಗೆ ಸೇರಿದ ಬಾಲಸುಬ್ರಹ್ಮಣ್ಯಂ ಎಂಬ ಈ ಡಾಕ್ಟರ್ ನಿಜವಾಗಿ ಸಾಮಾನ್ಯ ಜನರಿಗೆ ದೇವರಾಗಿ ನೆಲೆಸಿದ್ದಾರೆ…. ಬಡವರ ಕಷ್ಟವನ್ನು ಅರ್ಥ ಮಾಡಿಕೊಂಡಿದ್ದಾರೆ. ಕೇವಲ 20 ರೂಪಾಯಿಗಳ ಮಾತ್ರ ತಗೆದುಕೊಳ್ಳುತ್ತಾರೆ. ವೈದ್ಯಕೀಯ ಚಿಕಿತ್ಸೆಯನ್ನು ಆರಂಭಿಕ ದಿನಗಳಲ್ಲಿ 2 ರೂಪಯಿಯ ಶುಲ್ಕವನ್ನು ಬಡವರಿಂದ ತೆಗೆದುಕೊಳ್ಳುತಿದ್ದರು.

Image result for doctor balasubramanian coimbatore

 

ಬಡವರ ವೈದ್ಯರೆಂದು ಗುರುತಿಸಲ್ಪಡುವ ಬಾಲಸುಬ್ರಹ್ಮಣ್ಯಂ ಇನ್ನಿಲ್ಲವೆಂಬ ವಾರ್ತೆ ಜನರಲ್ಲಿ ನೋವನ್ನು ತುಂಬಿದೆ…. 2 ರೂಪಯಿ ಡಾಕ್ಟರ್, 20 ರೂಪಾಯಿ ಡಾಕ್ಟರ್ ಎಂದು ಕರೆಸಿಕೊಳ್ಳುತ್ತಿದ್ದವರು ಶುಕ್ರವಾರ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.

Image result for doctor balasubramanian coimbatore

ಡಾ. ಸುಬ್ರಮಣ್ಯಂ ಮರಣದ ವಿಷಯ ತಿಳಿದು ಸ್ಥಳೀಯರು ಅವರ ಭಾವಚಿತ್ರಕ್ಕೆ ಊದಿನ ಕಡ್ಡಿ, ಹೂವಿನ ಗುಚ್ಚಗಳನ್ನು ಅರ್ಪಿಸಿದರು. ಅವರ ಮೇಲಿರುವ ಪ್ರೀತಿಯಿಂದ ಕನಿಷ್ಠ ನೀರು ಕೂಡ ಮುಟ್ಟಲಿಲ್ಲ.

Image result for doctor balasubramanian coimbatore

 

ಅಂತಹ ದೊಡ್ಡ ಹೆಸರನ್ನು ಸಂಪಾದಿಸಿರುವ ಅವರದು ದೊಡ್ಡ ಕಾರ್ಪೊರೇಟ್ ಆಸ್ಪತ್ರೆಯೇನಲ್ಲ. ಕೊಯಮತ್ತೂರಿನಲ್ಲಿರುವ ರಾಜಗಣಪತಿ ನಗರದಲ್ಲಿರುವ ಅರೋಪೋಲೆಂಟಾ ರಸ್ತೆಯಲ್ಲಿ ಸಣ್ಣ ಕ್ಲಿನಿಕ್ ಇದು. ಬಡವರಿಗೆ ಅತ್ಯಲ್ಪ ಶುಲ್ಕಕ್ಕೆ ವೈದ್ಯಕೀಯ ಸೇವೆಗಳನ್ನು ಕೊಡುತಿದ್ದರು. ಇದರ ಪರಿಣಾಮವಾಗಿ, ಚೆರ್ತಾಲಾ, ಅನಪಲೆಮ್, ನೇತಾಜಿ ನಗರ ಮತ್ತು ಅನ್ನಾನಗರದಿಂದ ರೋಗಿಗಳು ಆತನ ಆಸ್ಪತ್ರೆಯ ಮುಂದೆ ಕ್ಯೂ ಕಟ್ಟುತಿದ್ದರು.

Related image

 

ಕಳೆದ ಎರಡು ವರ್ಷಗಳಿಂದ ರೂ. 2 ರ ಶುಲ್ಕದಿಂದ ಅವರು ವೈದ್ಯಕೀಯ ಸೇವೆಗಳನ್ನು ರೂ 20 ಕ್ಕೆ ಅತ್ಯಧಿಕ ಶುಲ್ಕವನ್ನು ನೀಡಿದ್ದಾರೆ. ಬಡವರಿಗೆ ಉಚಿತವಾಗಿ ಮತ್ತು ಶುಲ್ಕದಿಂದ ವಿನಾಯಿತಿ ನೀಡಲಾಗುತ್ತಿತ್ತು. ಇನ್ನು ಅವರಿಲ್ಲವೆಂದು ವಿಷಯ ತಿಳಿದು ಆ ಕ್ಲಿನಿಕ್ ಕೂಡ ಸಣ್ಣದಾಗಿದೆ. ಮೌಲ್ಯಗಳೆ ಅವರ ಆಸ್ತಿ ಎನ್ನುವುದಕ್ಕೆ ಇವರೊಂದು ನಿದರ್ಶನವಾಗಿದ್ದಾರೆ, ನೀವೇನೆನ್ನುವಿರಿ… ?