ರೈಲ್ವೆ ಟ್ರ್ಯಾಕ್ ನಡುವೆಯಲ್ಲಿ ಮರ ಕತ್ತರಿಸೋಣ ಎಂದು ಹೋಗುವಷ್ಟರಲ್ಲಿ ಸತ್ತುಹೋಗುತ್ತಿದ್ದಾರೆ

ನಂಬಿಕೆಗೆ ಇಟ್ಟ ಹೆಸರು ನಮ್ಮ ಭಾರತ ದೇಶ.ಕಂಡ ಕಲ್ಲು,ಮರ ಕೂಡ ದೇವರು ಎಂದು ಭಾವಿಸುವುದರಲ್ಲಿ ನಮ್ಮಗೆ ನಾವೇ ಸಾಟಿ. ಆದರೆ,ನಮ್ಮ ಜೊತೆಗೆ ಮತ್ತೊಂದು ದೇಶದಲ್ಲಿ ಕೂಡ ಕೆಲವು ನಂಬಿಕೆಗಳು ಬಹಳ ಹೆಚ್ಚು ಅದೆ ಜಪಾನ್.ಈ ದೇಶದಲ್ಲಿ ಕೂಡ ದೇವಾಲಯಗಳು ಹೆಚ್ಚಾಗಿ ಕಾಣಿಸುತ್ತದೆ.ಇನ್ನು ನಮ್ಮ ದೇಶದಲ್ಲಿ ಮನೆ,ದೇವಾಲಯ,ಸರ್ಕಾರಿ ಕಚೇರಿಗಳು ಹಾಗು ರೈಲ್ವೆ ಸ್ಟೇಷನ್ ಕಟ್ಟುವಾಗ ಯಾವುದಾದರು ಮರ ಅಡ್ಡ ಬಂದರೆ ಅದನ್ನು ಕಡಿದು ಮನೆ ಆಫೀಸ್ ಕಟ್ಟುತ್ತೆವೆ.ಆದರೆ ಜಪಾನ್ ನವರು ಹಾಗೆ ಅಡ್ಡ ಬಂದ ಒಂದು ಮರದ ವಿಷಯಕ್ಕೆ ಹೋಗಲು ಗಡ ಗಡ ಎಂದು ನಡಗುತ್ತಿದ್ದಾರೆ.ಇಷ್ಟಕ್ಕೂ ಆ ಮರ ಯಾವುದು ಆ ವಿಚಿತ್ರವೇನು ಎಂದು ನಾವು ತಪ್ಪದೆ ತಿಳಿದುಕೊಳ್ಳಬೇಕು.

Image result for tree in railway station in japan

ಇದು ಜಪಾನ್ ನ ಒಂದು ವಕಾಸ ಪ್ರಾಂತ್ಯ ಅಲ್ಲಿರುವ ಕಮರ್ಷಿಯಲ್ ರೈಲ್ವೆ ಸ್ಟೇಷನಲ್ಲಿ ಒಂದು ಮಹತ್ವವಿದೆ.ಅದೇನೆಂದರೆ ಅಲ್ಲಿ ಒಂದು ದೊಡ್ಡ ಮರವಿದೆ ಈ ಮರ 700 ವರ್ಷದ ಹಿಂದೆ ಸಸಿ ನೆಟ್ಟಿದ್ದು ಎಂದು ಅಲ್ಲಿರುವ ರೈಲ್ವೆ ಅಧಿಕಾರಿಗಳು ಹೇಳುತ್ತಿದ್ದಾರೆ. ಕಮರ್ಷಿಯಲ್ ಸ್ಟೇಷನ್ 1910 ರಲ್ಲಿ ಪ್ರಾರಂಭವಾಯಿತು.ಹಿಂದೆ ಈ ಮರ ರೈಲ್ವೆ ಪ್ರಯಾಣಿಕರಿಗೆ ನೆರಳನ್ನು ಕೊಡುತಿತ್ತು ಇನ್ನು ಇದರಿಂದ ಬರುವ ಗಾಳಿಯಿಂದ ಪ್ರಯಾಣಿಕರು ಇಲ್ಲಿ ಕೂತು ವಿಶ್ರಾಂತಿ ತಗೆದುಕೊಳ್ಳುತ್ತಿದ್ದರು.ಕೆಲವು ವರ್ಷ ಆದಮೇಲೆ ಜಪಾನ್ ನಲ್ಲಿ ಜನ ಸಂಖ್ಯೆ ಹೆಚ್ಚಾದುದರಿಂದ ಈ ಮರದ ಹತ್ತಿರವಿರುವ ರೈಲ್ವೆ ಸ್ಟೇಷನ್ ನ ವಿಸ್ತರಿಸಬೇಕಾದ ಅವಶ್ಯಕೆತೆ ಬಂತು.ಇದರಿಂದ ಈ ಸ್ಟೇಷನ್ ಗೆ ಅಡ್ಡವಾಗಿ ಇದ್ದ ಈ ಮರವನ್ನು ಕಡಿದು ಹಾಕಿ ರೈಲ್ವೆ ಸ್ಟೇಷನ್ ವಿಸ್ತರಿಸಬೇಕು ಎಂದು ರೈಲ್ವೆ ಅಧಿಕಾರಿಗಳು ನಿರ್ಣಯಿಸಿದರು.ಆ ಮರವನ್ನು ಕಡಿಯಬೇಕು ಎಂದು ಹೋದ ಕೂಲಿಗಳು ಏನೋ ಏನೋ ಕಾರಣಗಳಿಂದ ಮರಣ ಹೊಂದಿದರು.

Image result for mystory tree in japan railway station

ಆದರಿಂದ ಇವರು ಎಲ್ಲಾ ಮರಣ ಹೊಂದಿದು ಈ ಮರದಿಂದ ಎಂದು ಆ ಪ್ರಾಂತ್ಯದವರು ಗಟ್ಟಿಯಾಗಿ ನಂಬಿದರು.ಆದರಿಂದ ಆ ಮರವನ್ನು ಯಾರು ಕಡಿಯುವುದಕ್ಕೆ ಮುಂದಾಗಲಿಲ್ಲ. ಆ ಮರವನ್ನು ಕಡಿದು ಬಿಡೋಣ ಎಂದು ಕೆಲ ರೈಲ್ವೆ ಅಧಿಕಾರಿಗಳು ಅಂದುಕೊಂಡರು ಕೂಡ ಸ್ಥಳೀಯರು ಆ ಮರವನ್ನು ಕಡಿಯಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು.ಇದರಿಂದ ಆ ರೈಲ್ವೆ ಅಧಿಕಾರಿಗಳು ಮರ ಕಡಿಯುವ ಉದ್ದೇಶ ಬಿಟ್ಟುಬಿಟ್ಟರು. ರೈಲ್ವೆ ಅಧಿಕಾರಿಗಳು ಆ ಮರಕ್ಕೆ ಸ್ವಲ್ಪ ಜಾಗ ಬಿಟ್ಟು ತಮ್ಮ ಪ್ಲಾನಿಂಗ್ ನ ಬದಲಾಯಿಸಿ ರೈಲ್ವೆ ಸ್ಟೇಷನ್ ನ ನಿರ್ಮಾಣ ಮಾಡಿದರು.ಈಗ ಆ ಮರ ಎಷ್ಟೋ ವಿಸ್ತಾರವಾಗಿ ಬೆಳೆದು ಎಷ್ಟೋ ಜನಕ್ಕೆ ನೆರಳು ಕೊಡುತ್ತಿದೆ.ಈ ಘಟನೆ ನೋಡಿದರೆ ನಮ್ಮ ಭಾರತ ದೇಶದಲ್ಲೇ ಅಲ್ಲದೆ ಜಪಾನ್ ಪ್ರಜೆಗಳಿಗೆ ಕೂಡ ಕೆಲವು ನಂಬಿಕೆಗಳು ಇದೆ ಎಂದು ಸಾಬೀತಾಗಿದೆ.ಆ ಮರವನ್ನು ದೈವದ ಮರವೆಂದು ಭಾವಿಸಿ ಆ ಪ್ರಾಂತ್ಯದಲ್ಲಿ ಪೂಜೆಗಳು ಮಾಡುತ್ತಿರುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.ಇವನ್ನು ಕೇಳುತ್ತಿದ್ದರೆ ಆಶ್ಚರ್ಯವೆನುಸುತ್ತಿದೆ ಅಲ್ಲವೇ ಈ ಮರವನ್ನು ಕಡಿಯಲು ಹೋದ ರೈಲ್ವೆ ಅಧಿಕಾರಿಗಳು ಸಹ ಮರಣ ಹೊಂದಿದ್ದಾರೆ.

Image result for mystory tree in japan railway station