ಕಲಿಯುಗ ಜನರ ಬಗ್ಗೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಈ 5 ಮಾತುಗಳು 100% ಸತ್ಯ..!!

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ್ಮ ಜೀವನದ ಎಲ್ಲಾ ಸತ್ಯಗಳನ್ನು ಅಲ್ಲೇ ತಿಳಿಸಿದ್ದಾರೆ. ಪಾಂಡವರಿಗೆ ಭೋದನೆ ಮಾಡುತ್ತ ಕಲಿಯುಗದ ಎಲ್ಲಾ ನ್ನು ತಿಳಿಸಿದ್ದಾರೆ ಅದು ಅಕ್ಷರಶಃ ನಿಜವಾಗಿದೆ,ಕಲಿಯುಗದ ಅಂತ್ಯವನ್ನು ಕೂಡ ಅದರಲ್ಲೇ ತಿಳಿಸಿದ್ದಾರೆ. ಈ ದಿನ ಕೃಷ್ಣ ಹೇಳಿದ ಯಾವುದರ ಬಗ್ಗೆ ಯಾವ ಮಾತು ಸತ್ಯವಾಗಿದೆ,ಆ ಮಾತು ಏನೆಂದು ಮುಂದೆ ತಿಳಿದುಕೊಳ್ಳೋಣ. ಕಲಿಯುಗದಲ್ಲಿ ಏನಾಗುವುದು ಹೇಗೆ ಇರುವುದು ಎಂದು ತಿಳಿದುಕೊಳ್ಳಲು ಪಾಂಡವರಿಗೆ ಕುತೂಹಲ ಹಾಗು ಬಯಕೆ ಕೂಡ ಇರುತ್ತದೆ. ಶ್ರೀ ಕೃಷ್ಣನ ಬಳಿ ತಮ್ಮ ಬಯಕೆಯನ್ನು ಹೇಳಿಕೊಳ್ಳುತ್ತಾರೆ.

Image result for krishna

ಆಗ ಶ್ರೀ ಕೃಷ್ಣ ಪಾಂಡವರೆಲ್ಲರನ್ನು ಕಾಡಿಗೆ ಹೋಗಿ ಅಲ್ಲಿ ನೀವು ಏನು ನೋಡುತ್ತಿರಿ ಅದನ್ನು ಬಂದು ನನಗೆ ತಿಳಿಸಿ ಎಂದು ಹೇಳುತ್ತಾನೆ. ಅದೇ ರೀತಿ ಪಾಂಡವರು ಕಾಡಿಗೆ ಹೋಗಿ ತಾವು ಕಂಡಿದ್ದನ್ನು ಒಬೊಬ್ಬರಾಗಿ ಬಂದು ಕೃಷ್ಣನ ಬಳಿ ತಿಳಿಸುತ್ತಾರೆ. ಮೊದಲಿಗೆ ಯುದ್ದಿಸ್ಟರ ಕಾಡಿನಲ್ಲಿ ಒಂಟಿ ಸಲಗವನ್ನು ನೋಡಿದೆ ಎಂದು ತಿಳಿಸುತ್ತಾನೆ. ಅದಕ್ಕೆ ಶ್ರೀ ಕೃಷ್ಣ ಹೇಳುತ್ತಾನೆ ಕಲಿಯುಗದಲ್ಲಿ ರಾಜ್ಯವನ್ನು ಆಳುವರು ಹೇಳುವುದು ಒಂದು,ಮಾಡುವುದು ಇನ್ನೊಂದು. ನಂತರ ಭೀಮ ಬಂದು ಒಂದು ಹಸು ಅದರ ಜೊತೆ ಒಂದು ಕರು ಮತ್ತು ಕರುವಿನ ಮೈಯಲ್ಲಿ ರಕ್ತವಿತ್ತು ಅದನ್ನು ನಾನು ನೋಡಿದೆ ಎಂದು ಹೇಳುತ್ತಾನೆ. ಅದಕ್ಕೆ ಶ್ರೀ ಕೃಷ್ಣ ಕಲಿಯುಗದಲ್ಲಿ ಮನುಷ್ಯ ತಮ್ಮ ಮಕ್ಕಳ ಮೇಲೆ ಮಮತೆ,ಕರುಣೆ ಪ್ರೀತನ್ನು ಹೊಂದಿರುತ್ತಾರೆ ಎಂದರೆ ಅವರ ಪ್ರೀತಿಯಿಂದಲ್ಲೇ ಬಹಳಷ್ಟು ಮಕ್ಕಳು ಹಾಳಾಗುತ್ತಾರೆ ಹಾಗು ಅವರ ಜೀವನ ದಾರಿನೇ ಬದಲಾಗುತ್ತವೆ ಹಾಗೆ ತಮ್ಮ ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ಬೆಳೆಸುವುದು ಒಂದು ಘನತೆ,

Image result for krishna

ಗೌರವ ಎಂದು ಭಾವಿಸುತ್ತಾರೆ,ಜೊತೆಗೆ ಯಾವುದೊ ಒಂದು ಒಳ್ಳೆ ಕೆಲಸ ಅಥವಾ ಸಮಾಜ ಸೇವೆಯನ್ನು ನಮ್ಮ ಮಕ್ಕಳು ಬೇಡ ಪಕ್ಕದ ಮನೆ ಮಕ್ಕಳು ಮಾಡಲಿ ಅವರಿಗೆ ಸನ್ಮಾನ ಮಾಡೋಣ ಎಂದು ಹೇಳುತ್ತಾರೆ. ಮೂರನೆಯದಾಗಿ ಅರ್ಜುನ ಬಂದು ನಾನು ಒಂದು ಪಕ್ಷಿ ಅದರ ಮೇಲೆ ಒಂದು ವೇದದ ಮಂತ್ರ,ಆ ಪಕ್ಷಿ ಮನುಷ್ಯನ ಒಂದು ಭಾಗವನ್ನು ಕಿತ್ತು ತಿನ್ನುತ್ತಿರುವುದನ್ನು ನೋಡಿದೆ. ಅದಕ್ಕೆ ಶ್ರೀ ಕೃಷ್ಣ ನೀಡಿದ ಉತ್ತರ ಕಲಿಯುಗದಲ್ಲಿ ಯಾರನ್ನು ವಿದ್ವಾಂಸರು ಎಂದು ತಿಳಿದಿರುತ್ತಾರೋ ಅವರ ಕಣ್ಣು ಮತ್ತು ಮನಸ್ಸು ಇನ್ನೊಬ್ಬರ ಸಂಪತ್ತಿನ ಮೇಲಿರುತ್ತದೆ. ಎಷ್ಟೇ ದೊಡ್ಡವನಾದರೂ ಸಂಪತ್ತಿನಿಂದ ಅಳೆಯುವುದು ಕಲಿಯುಗದಲ್ಲಿ ತಪ್ಪುವುದಿಲ್ಲ. ಬೇರೆಯವರ ಸಂಪತ್ತನ್ನು ಕಸಿದುಕೊಳ್ಳುವ ಆಸೆಯನ್ನು ಬಿಡುವುದಿಲ್ಲ. ನಾಲ್ಕನೆಯದಾಗಿ ನಕುಲ ತಾನು ನೋಡಿದ್ದನ್ನು ಹೇಳುತ್ತಾನೆ. ಒಂದು ದೊಡ್ಡ ಕಲ್ಲು ಬೆಟ್ಟದ ಮೇಲಿಂದ ಜಾರಿಕೊಂಡು ಬರುತ್ತಿರುತ್ತದೆ ಎಷ್ಟೇ ಅಡೆ ತಡೆ ಬಂದರು ಅದು ಜಾರುವುದನ್ನು ತಪ್ಪಿಸಲು ಆಗಿರುವುದಿಲ್ಲ ಆದರೆ ಒಂದು ಸಣ್ಣ ಗಿಡ ಆ ಕಲ್ಲನ್ನು ತಡೆದು ನಿಲ್ಲಿಸುತ್ತದೆ. ಅದಕ್ಕೆ ಶ್ರೀ ಕೃಷ್ಣ ಕಲಿಯುಗದಲ್ಲಿ ಮನುಷ್ಯನ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ ಅದನ್ನು ತಡಿಯಲು ಮನುಷ್ಯ ಯಾವುದು ದೊಡ್ಡದು ಅಂದು ಕೊಂಡಿರುತ್ತನೋ ಅದರಿಂದ ಸಾಧ್ಯವಾಗುವುದಿಲ್ಲ.

 

ಯಾವುದು ಇದು ಚಿಕ್ಕದು ಎಂದು ತಿಳಿದಿರುತ್ತನೋ ಅದರಿಂದ ಮಾತ್ರ ಅವನ ಪತನವನ್ನು ತಡೆಯಲು ಸಾಧ್ಯ. ಮನುಷ್ಯ ದೊಡ್ಡದು ಎಂದು ತಿಳಿದಿರುವುದು ಹಣ,ಸಂಪತ್ತು, ಚಿಕ್ಕದು ಅಂದುಕೊಂಡಿರುವುದು ದೇವರ ನಾಮ,ಭಕ್ತಿ. ಕೊನೆಯದಾಗಿ ಸಹದೇವ ನೋಡಿದನ್ನು ಬಂದು ತಿಳಿಸುತ್ತಾನೆ. ಒಂದು ಗುಹೆ ರೀತಿ ಇರುವ ಮಧ್ಯೆ ಭಾಗದಲ್ಲಿ ಆಳವಾದ ಖಾಲಿ ಇರುವ ಬಾವಿಯನ್ನು ನೋಡಿದೆ. ಅದಕ್ಕೆ ಶ್ರೀ ಕೃಷ್ಣ ಕಲಿಯುಗದಲ್ಲಿ ಮನುಷ್ಯ ತನ್ನಗೋಸ್ಕರ ವ್ಯರ್ಥ ಖರ್ಚನ್ನು ಮಾಡುತ್ತಾನೆ. ಆದರೆ ಬೇರೆಯವರಿಗೆ ಸಹಾಯ ಮಾಡುವುದಿಲ್ಲ. ಒಂದು ವೇಳೆ ಮಾಡಿದರು ಆದರಿಂದ ತನ್ನ ಸ್ವಾರ್ಥ ಲಾಭವನ್ನೇ ಬಯಸಿ ಸಹಾಯ ಮಾಡುತ್ತಾನೆ.

Image result for krishna

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source;-https://www.youtube.com/watch?v=9vSrj95mSEk