ಈ ಮಾಸದಲ್ಲಿ ಹೀಗೆ ಮಾಡಿದರೆ ನೂರು ಅಶ್ವಮೇಧ ಯಾಗಗಳ ಫಲ..!!

ಹಿಂದೂ ಧರ್ಮದ ಚಾಂದ್ರಮಾನ ಪಂಚಾಗದ ಹನ್ನೊಂದನೇ ಮಾಸ ಈ ಮೇಘ ಮಾಸ. ಈ ಮಾಸದಲ್ಲಿ ವಿಷ್ಣುವಿನ ಆರಾಧನೆಗೆ ತುಂಬಾ ಶ್ರೇಷ್ಠವಾದದ್ದು. ಈ ಮಾಸದಲ್ಲಿ ಭೀಷ್ಮನು ಪಾಂಡವರಿಗೆ ವಿಷ್ಣು ಸಹಸ್ರನಾಮವನ್ನು ಪಠಿಸಿದರು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಮಾಘ ಮಾಸದಲ್ಲಿ ಪವಿತ್ರ ಮಾಘಸ್ನಾನ ಮಾಡಿದರೆ ನೂರು ಅಶ್ವಮೇಧ ಯಾಗಗಳನ್ನು ಮಾಡಿದ ಪುಣ್ಯಕ್ಕೆ ಸಮಾನವಾಗಿರುತ್ತದೆ. ಬ್ರಹ್ಮ ವೈವರ್ತ ಪುರಾಣದ ಪ್ರಕಾರ,ಮಾಘ ಮಾಸದಲ್ಲಿ ಭಗವಾನ್ ವಿಷ್ಣುವು ಗಂಗಾ ನದಿಯಲ್ಲಿ ವಾಸಿಸುತ್ತಾನೆ.

Image result for ganga nadi

ಹಾಗಾಗಿ ಗಂಗೆಯ ನೀರು ಈ ಕಾಲದಲ್ಲಿ ಎಲ್ಲಾ ಕಾಯಿಲೆಗಳನ್ನು ಗುಣಪಡಿಸಬಲ್ಲದು ಎಂದು ನಂಬಲಾಗಿದೆ,ಆದ್ದರಿಂದ ಮಾಘ ಮಾಸದ ಸ್ನಾನ ತುಂಬಾ ಪುಣ್ಯಕರವಾದದ್ದು. ಈ ಮಾಸದಲ್ಲಿ ವಿಷ್ಣುವನ್ನು ಶ್ರದ್ದಾ,ಭಕ್ತಿಯಿಂದ ಆರಾಧಿಸಿದರೆ ಮೋಕ್ಷ ದೊರೆತು ವೈಕುಂಠವನ್ನು ಸೇರಬಹುದು ಎಂದು ಹೇಳಲಾಗಿದೆ. ಮಾಘ ಮಾಸದಲ್ಲಿ ಸೂರ್ಯನು ಮಕರ ರಾಶಿಯಲ್ಲಿ ಇರುವುದರಿಂದ ಪ್ರಾತಃ ಕಾಲದಲ್ಲಿ ಸ್ನಾನ ಮಾಡುವವರ, ಸಮಸ್ತ ಪಾಪಗಳು ನಾಶವಾಗಿ ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ. ಸಾಮಾನ್ಯ ದಿನಗಳಲ್ಲಿ ನಾವು ಜಪ,ಧ್ಯಾನ,

Image result for makara rashi

ಪೂಜಿಯಿಂದ ವಿಷ್ಣುವಿನ ಅನುಗ್ರಹವನ್ನು ಪಡೆಯುತ್ತೇವೆ,ಆದರೆ ಮಾಘ ಸ್ನಾನ ಮಾಡಿದರೆ ವಿಷ್ಣುವಿನ ಅನುಗ್ರಹ ಹೆಚ್ಚಾಗಿ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಹೇಳುತ್ತಿದೆ. ಮಾಘ ಪುರಾಣವನ್ನು ಕೇಳಿದವರಿಗೆ ಕಷ್ಟಗಳೆಲ್ಲಾ ದೂರವಾಗಿ,ಈ ವ್ರತದ ಫಲವು ಸಂಪೂರ್ಣವಾಗಿ ಸಿಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತಿದೆ. ಅದಲ್ಲದೆ ಮಾಘ ಸ್ನಾನ ಮಾಡಿದರೆ ಅರೋಗ್ಯ ಹೆಚ್ಚಾಗಿ ಆಯಸ್ಸು ಕೂಡ ವೃದ್ಧಿಸುತ್ತದೆ. ವಿಷ್ಣುವಿನ ಅನುಗ್ರಹ ದೊರೆತು ಸಂಪತ್ತು ಹೆಚ್ಚಾಗಿ,ವೈಕುಂಠ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಹೇಳುತ್ತಿದೆ.

Image result for ganga nadi

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=aK_BiMWCynY