ಶಿವಣ್ಣ ತಲೆಗೆ ಹುಳ ಬಿಟ್ಟ ಉಪ್ಪಿ..! ಬರಲಿದ್ಯಾ ಓಂ 2..?ಬಂದರೆ ಓಂ ಚಿತ್ರದ ಅಭಿಮಾನಿಗಳಿಗೆ ಆಗುವ ಖುಷಿ ಅಸ್ಟ್ ಇಸ್ಟ್ ಅಲ್ಲ…!!

ಓಂ ಚಿತ್ರವೂ ಕನ್ನಡದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಸಿನಿಮಾ. ಉಪೇಂದ್ರ ಅವರ ತಲೆಗೆ, ಶಿವಣ್ಣನ ಕಲೆಗೆ ಒಳ್ಳೆಯ ಬೆಲೆ ಸಿಕ್ಕಿದ್ದು ‘ಓಂ’ ಸಿನಿಮಾದಿಂದ. ಆದರೆ ಈಗ ‘ಓಂ’ 2 ಬರುತ್ತಾ ಎಂಬ ಕುತೂಹಲ ಹುಟ್ಟಿದೆ. ‘ಓಂ 2’ ಸಿನಿಮಾದ ಬಗ್ಗೆ ಫೇಸ್ಬುಕ್ ನಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ನಟ ಉಪೇಂದ್ರ,ಉಪೇಂದ್ರ ಮೊನ್ನೆ ಶಿವಣ್ಣನೊಂದಿಗೆ ತೆಗೆದ ಒಂದು ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದರು.

ಅದರ ಜೊತೆ ‘om 2 coming?’ ಎಂದು ಬರೆದು ಎಲ್ಲರ ತಲೆಗೆ ಹೂಳ ಬಿಟ್ಟಿದ್ದರು. ಹಾಗಾದ್ರೆ,ಉಪೇಂದ್ರ ಈಗ ಮತ್ತೆ ಶಿವರಾಜಕುಮಾರ್ ಜೊತೆ ಸೇರಿ ‘ಓಂ 2’ ಸಿನಿಮಾ ಮಾಡುತ್ತಾರ..? ನಟ ಶಿವರಾಜ್ ಕುಮಾರ್ ಸ್ಟಾರ್ ಸುವರ್ಣ ವಾಹಿನಿಗೆ ಒಂದು ಹೊಸ ಟಾಕ್ ಶೋ ಮಾಡುತ್ತಿದ್ದಾರೆ, ವಿಶೇಷ ಅಂದರೆ ಈ ಕಾರ್ಯಕ್ರಮದ ಮೊದಲ ಅತಿಥಿಯಾಗಿ ನಟ ಉಪೇಂದ್ರ ಭಾಗಿಯಾಗಿದ್ದಾರೆ.

Image result for uppi and shivaraj kumar

No 1 ಯಾರಿ ವಿಥ್ ಶಿವಣ್ಣ? ಸ್ಟಾರ್ ಸುವರ್ಣ ವಾಹಿನಿಯ ಹೊಸ ಟಾಕ್ ಶೋ. ಕನ್ನಡದ ಈ ಹೊಸ ಕಾರ್ಯಕ್ರಮದ ಮೂಲಕ ಮತ್ತೆ ಶಿವಣ್ಣ ಕಿರುತೆರೆಗೆ ಮರಳಿದ್ದಾರೆ. ಈ ಕ್ರಾಯಕ್ರಮದ ಶೂಟಿಂಗ್ ವೇಳೆ ಉಪೇಂದ್ರ,ಶಿವಣ್ಣ ಜೊತೆ ಒಂದು ಫೋಟೋ ತಗೆಸಿಕೊಂಡು,ಅದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ,ಅಷ್ಟೇ ಅಲ್ಲದೆ ‘om 2 coming?’ ಎಂದು ಉಪೇಂದ್ರ ಬರೆದಿದ್ದಾರೆ.

Image result for uppi and shivaraj kumar

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=U9RXXfyd0q0