ಶ್ರೀ ಮಹಾಲಕ್ಷ್ಮೀ ಕಟಾಕ್ಷಕ್ಕಾಗಿ ಏನು ಮಾಡಬೇಕು..??ನಿಮಗೆ ಗೊತ್ತಾ…?

ಶ್ರೀ ಮಹಾಲಕ್ಷ್ಮೀ ಕಟಾಕ್ಷಕ್ಕಾಗಿ ಬೆಳಗಿನ ಜಾವ ಎದ್ದೇಳುವಾ ಕ್ಷಣ ಯಾರನ್ನು ನೋಡದೆ ಮೊದಲಿಗೆ ತಮ್ಮ ಕರ ಹಸ್ತವನ್ನು ನೋಡುತ್ತಾ ಎದ್ದೇಳಬೇಕು. ಸೂರ್ಯೋದಯಕ್ಕೂ ಮುಂಚೆ ಎದ್ದು,ಮನೆಯ ಹಿತ್ತಿಲ ಬಾಗಿಲನ್ನು ತೆರೆದು ಇಡಬೇಕು. ಮೊದಲಿಗೆ ಹಿತ್ತಿಲ ಬಾಗಿಲನ್ನು ತೆರದ ನಂತರವೇ ಮನೆಯ ಮುಂದಿನ ದ್ವಾರವನ್ನು ತೆರೆಯಬೇಕು. ಮುಖ್ಯವಾದ ಹಣಕ್ಕೆ ಸಂಬಂಧಿಸಿದ

ಕಾರ್ಯಗಳಿಗೆ, ಸೋಮವಾರ,ಬುಧುವಾರ ದಿನಕ್ಕೆ ಪ್ರಾಧ್ಯಾನತೆ ನೀಡಬೇಕು. ಬಿಳಿಯ ವಸ್ತುಗಳನ್ನು ಗುರುವಾರದ ದಿನ ದಾನ ಮಾಡಿದರೆ ಲಕ್ಷ್ಮೀ ಕಟಾಕ್ಷ ಲಭಿಸುತ್ತದೆ. ಆರ್ಥಿಕಕ್ಕೆ ಸಂಬಂಧಿಸಿದ ಕೆಲಸಕ್ಕೆ ಹೋಗುವಾಗ ಶ್ರೀಯಂತ್ರ ಅಥವಾ ವಿನಾಯಕನನ್ನು ಪೂಜಿಸಿ ಹೋದರೆ ಒಳ್ಳೆಯದು. ಮಂಗಳವಾರ,ಶುಕ್ರವಾರ ದಿನಗಳಲ್ಲಿ ಪಂಚ ಮುಖ ದೀಪಗಳನ್ನು ಹಚ್ಚಿದರೆ ಒಳ್ಳೆಯದು,ಆ ದಿನ ತಾಂಬೂಲ ಕೊಟ್ಟರೆ ಒಳ್ಳೆಯದು.

Image result for lakshmi god

ಹೀಗೆ ಮುತ್ತೈದೇಯರಿಗೆ ತಾಂಬೂಲವನ್ನು ಕೊಡುವುದರಿಂದ ಹಿಂದಿನ ಜನ್ಮದ ಪಾಪಗಳು ದೂರವಾಗಿ ಕುಟುಂಬದಲ್ಲಿ ಸುಖ-ಸಂತೋಷಗಳು ನೆಲೆಸುತ್ತದೆ ಎಂದು ಪುರಾಣಗಳು ಹೇಳುತ್ತಿದೆ. ಹಾಗೆಯೇ ಹುಣ್ಣಿಮೆಯ ದಿನ ಸ್ನಾನವನ್ನು ಮಾಡಿ ಸತ್ಯ ನಾರಾಯಣ ಸ್ವಾಮಿಯನ್ನು ತುಳಸಿದಳದಿಂದ ಅರ್ಚನೆ ಮಾಡಿ,ಹಾಲಿನಿಂದ ಮಾಡಿದ ಪಾಯಸ,ಕಲ್ಲುಸಕ್ಕರೆ, ಹಣ್ಣುಗಳನ್ನು ನೈವೇದ್ಯವಾಗಿ ಇಡಬೇಕು. ಸುಳ್ಳನ್ನು ಹೇಳುವವರು ಬೇರೆಯವರ ಮನಸ್ಸನ್ನು ನೋವು ಮಾಡುವವರ ಹತ್ತಿರ ಲಕ್ಷ್ಮೀ ದೇವಿ ನೆಲೆಸಿರುವುದಿಲ್ಲ,

Image result for lakshmi god

ಮನೆಯಲ್ಲಿ ಕೂದಲು ಗಾಳಿಗೆ ತಿರುಗಾಡುತ್ತಾ ಇದ್ದರೂ ಸಹ ಲಕ್ಷ್ಮೀ ದೇವಿ ಆ ಮನೆಯಲ್ಲಿ ನೆಲೆಸಿರುವುದಿಲ್ಲ. ಹೊರಗಡೆಯಿಂದ ಬಂದಾಗ ಕಾಲನ್ನು ಶುಭ್ರ ಮಾಡದೇ ಇದ್ದರೆ ಲಕ್ಷ್ಮೀ ದೇವಿ ಆ ಮನೆಯಲ್ಲಿ ನೆಲೆಸಿರುವುದಿಲ್ಲ,ತಂದೆ ತಾಯಿಯರಿಗೆ ಗೌರವ ಕೊಡದ ಜಾಗದಲ್ಲಿ,ಉಗುರನ್ನು ಕಚ್ಚುವ ಅಭ್ಯಾಸ ಇರುವ ಮನೆಯಲ್ಲಿ ಲಕ್ಷ್ಮೀ ದೇವಿ ಇರುವುದಿಲ್ಲ. ಮುಖ್ಯವಾದ ಕೆಲಸಕ್ಕೆ ಹೊರಗಡೆ ಹೋಗುವಾಗ ಉದ್ದಿನಬೇಳೆಯನ್ನು ಕೈ ಮುಷ್ಟಿಯಷ್ಟು ತಗೆದುಕೊಂಡು ಅದರಿಂದ ದೃಷ್ಟಿ ತಗೆದು ಹಾಕಿ ನಂತರ ಮನೆಯಿಂದ ಹೊರಗಡೆ ಹೋದರೆ ಆ ಕೆಲಸ ದಿಗ್ವಿಜಯವಾಗುತ್ತದೆ.

Image result for lakshmi god

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=-AOC73q_yLw