ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಹೇಗೆ ಪ್ರದಕ್ಷಿಣೆ ಮಾಡಬೇಕು..?

ನಾವು ದೇವಸ್ಥಾನಕ್ಕೆ ಹೋದರೆ ಪ್ರದಕ್ಷಿಣೆ ಹಾಕುತ್ತಿರುತ್ತೇವೆ,ಆದರೆ ಹೀಗೆ ಯಾವ ಕಾರಣಕ್ಕಾಗಿ ಮಾಡುತ್ತೇವೆ ಅನ್ನುವುದು ಮಾತ್ರ ತುಂಬಾ ಜನಕ್ಕೆ ತಿಳಿದಿರುವುದಿಲ್ಲ. ಭಗವಂತ ನಮ್ಮಗೆ ನೀವು ಬಿಟ್ಟರೆ ಬೇರೆ ಯಾರು ನಮ್ಮನ್ನು ರಕ್ಷಿಸುವುದಿಲ್ಲ,ನೀವು ತೋರಿಸುವ ಮಾರ್ಗದಲ್ಲಿಯೇ ಪ್ರಯಾಣ ಮಾಡುತ್ತೇನೆ ಎಂದು ಹೇಳಲು ಈ ಪ್ರದಕ್ಷಿಣೆ. ಈ ಜಗತ್ತಿನಲ್ಲಿ ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತ ಇರುತ್ತದೆ, ಹೀಗೆ ಇವು ಪ್ರದಕ್ಷಿಣೆ ಮಾಡುತ್ತಿರುವುದಿಂದಲೇ ಸ್ಥಿರವಾದ ಕಕ್ಷೆಯನ್ನು ಹೊಂದುತ್ತಿದೆ.

Image result for temple

ವಿಶ್ವದಲ್ಲಿ ಜನನದಿಂದ ಹಿಡಿದು ಮರಣದವರೆಗೂ ಒಂದು ಪ್ರದಕ್ಷಿಣೆ,ದೇವಸ್ಥಾನದಲ್ಲಿ ಎಷ್ಟು ಪ್ರದಕ್ಷಿಣೆಯನ್ನು ಎಷ್ಟು ಬಾರಿ ಮಾಡಿದರೆ ಏನು ಫಲ ಎಂಬುದನ್ನು ಈಗ ನಾವು ತಿಳಿಯೋಣ. ದೇವಸ್ಥಾನದಲ್ಲಿ ಐದು ಬಾರಿ ಪ್ರದಕ್ಷಿಣೆ ಮಾಡುವುದರಿಂದ ಜಯವನ್ನು ನಿಮ್ಮದಾಗಿಸಿಕೊಳ್ಳಬಹುದು, ಏಳು ಬಾರಿ ಪ್ರದಕ್ಷಿಣೆ ಮಾಡುವುದರಿಂದ ಶತ್ರುಗಳನ್ನು ಪರಾಜಯ ಮಾಡಬಹುದು. ದೇವಸ್ಥಾನದಲ್ಲಿ ಒಂಬತ್ತು ಬಾರಿ ಪ್ರದಕ್ಷಿಣೆ ಮಾಡುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ,

Image result for temple

ಹನ್ನೊಂದು ಬಾರಿ ಪ್ರದಕ್ಷಿಣೆ ಮಾಡುವುದರಿಂದ ಆಯುಷ್ಯ ವೃದ್ಧಿಯಾಗುತ್ತದೆ. ದೇವಸ್ಥಾನದಲ್ಲಿ 13 ಬಾರಿ ಪ್ರದಕ್ಷಿಣೆ ಮಾಡುವುದರಿಂದ ಪ್ರಾರ್ಥನೆ ಸಿದ್ಧಿಯಾಗುತ್ತದೆ,15 ಬಾರಿ ಪ್ರದಕ್ಷಿಣೆ ಮಾಡುವುದರಿಂದ ಧನಪ್ರಾಪ್ತಿಯಾಗುತ್ತದೆ. ದೇವಸ್ಥಾನದಲ್ಲಿ ಹದಿನೇಳು ಬಾರಿ ಪ್ರದಕ್ಷಿಣೆ ಮಾಡುವುದರಿಂದ ಧನ ವೃದ್ಧಿಯಾಗುತ್ತದೆ, ಹತೊಂಬತ್ತು ಬಾರಿ ದೇವಸ್ಥಾನದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ರೋಗ ನಿವಾರಣೆಯಾಗುತ್ತದೆ.

Image result for temple

ದೇವಸ್ಥಾನದಲ್ಲಿ ಬೆಳಗಿನ ಜಾವ ಪ್ರದಕ್ಷಿಣೆ ಮಾಡುವುದರಿಂದ ರೋಗ ನಿವಾರಣೆಯಾಗುತ್ತದೆ, ಮಧ್ಯಾಹ್ನದ ಸಮಯದಲ್ಲಿ ದೇವಸ್ಥಾನದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ. ದೇವಸ್ಥಾನದಲ್ಲಿ ಸಂಜೆ ಸಮಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಪಾಪ ದೂರವಾಗುತ್ತದೆ, ರಾತ್ರಿ ಸಮಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಮೋಕ್ಷ ಸಿದ್ಧಿಯಾಗುತ್ತದೆ.

Image result for temple

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=V0EBj56IB_Y