ಮನೆಯಿಂದ ಹೊರಗೆ ಹೋಗುವಾಗ ಅನುಸರಿಸಬೇಕಾದ ನಿಯಮಗಳು..!!

ನಾವು ಮನೆಯಿಂದ ಹೊರಡಗೆ ಹೋಗುತ್ತೇವೆ,ಅಂದರೆ,ಅದು ಖಚಿತವಾಗಿ ಯಾವುದೋ ಒಂದು ಕೆಲಸದ ಮೇಲೆ ಹೊರಗೆ ಹೋಗುತ್ತೇವೆ,ಅದು ಉದ್ಯೋಗ ಅಥವಾ ವ್ಯಾಪಾರ ಆಗಿರಬಹುದು. ನಾವು ಅಂದುಕೊಂಡ ಯಾವುದೇ ಕೆಲಸ ಆದರೂ ಸರಿ ವಿಜಯವಾಗಿ ಆಗಬೇಕೆಂದರೆ, ಕೆಲವು ನಿಯಮಗಳನ್ನು ಅನುಸರಿಸಿದರೆ ಒಳ್ಳೆಯದು. ಮನೆಯಿಂದ ಹೊರಗಡೆ ಹೋಗುವ ಮುನ್ನ

ಕಾಲನ್ನು ತೊಳೆದುಕೊಂಡು, ವೀಳ್ಯದೆಲೆ ಮೇಲೆ 1 ಚಿಕ್ಕ ಬೆಲ್ಲದ ತುಂಡನ್ನು ಇಟ್ಟು,ಅದರ ಮೇಲೆ ಹಸುವಿನ ತುಪ್ಪವನ್ನು ಹಾಕಿ,ಗಣೇಶನ ವಿಗ್ರಹದ ಮುಂದೆ ನೈವೇದ್ಯವಾಗಿ ಇಡಬೇಕು. “ಓಂ ಹೇರಂಬ ಗಣಪತಿಯೇ ನಮಃ”ಎಂಬ ಮಂತ್ರವನ್ನು 9 ಬಾರಿ ಪಠಿಸಬೇಕು. ಹೀಗೆ ಪಠಿಸುವುದರಿಂದ ಸರ್ವ ವಿಘ್ನಗಳು ದೂರವಾಗಿ ಎಲ್ಲವೂ ಒಳ್ಳೆಯದೇ ಆಗುತ್ತದೆ, ಅಂದುಕೊಂಡ ಕೆಲಸ ಸಕಾಲದಲ್ಲಿ ಆಗಿ ದುಡ್ಡಿನ ಅಭಾವ ಇರುವುದಿಲ್ಲ.

Image result for pooja for god

ಮನೆಯಿಂದ ಹೊರಗಡೆ ಹೋಗುವ ಮುಂಚೆ ಮನೆಯಲ್ಲಿ ದೇವರಿಗೆ ಪೂಜೆ ಮಾಡಿ ಆ ಹೂ ಮಂತ್ರಾಕ್ಷತೆಯನ್ನು ಜೇಬಿನಲ್ಲಿ ಸದಾಕಾಲ ಇಟ್ಟುಕೊಳ್ಳುವುದರಿಂದ ಯಾವ ಶಕುನವು ಬಂದರು ಒಳ್ಳೆಯದೇ ಆಗುತ್ತದೆ. ನಾವು ಹೊರಗಡೆ ಹೋಗುವಾಗ ಶ್ವಾಸ ಯಾವ ಮೂಗಿನ ರಂಧ್ರದಿಂದ ಮೊದಲಿಗೆ ಬರುತ್ತದೆಯೋ, ಅದನ್ನು ತಿಳಿದುಕೊಂಡು ಮೊದಲಿಗೆ ಆ ಪಾದವನ್ನು ಹೊರಗೆ ಇಟ್ಟರೆ ಅದು ಶುಭದಾಯಕವಾಗಿರುತ್ತದೆ. ಮನೆಯಿಂದ ಹೊರಗಡೆ ಹೋಗುವ ಮುಂಚೆ ಮನೆಯಲ್ಲಿರುವ ಅಮ್ಮ,ಅಕ್ಕ,ತಂಗಿ ಅಥವಾ ಹೆಂಡತಿಗೆ ಹೇಳಿ ಹೋಗುವುದರಿಂದ,ಕ್ಷೇಮವಾಗಿ ಹೋಗಿ ಲಾಭವಾಗಿ ಬರಬೇಕು ಎಂದು ಅವರ ಆಶಿಸು,ನಿಮ್ಮ ಮೇಲೆ ಬಿದ್ದು ಎಲ್ಲ ವಿಜಯ ನಿಮ್ಮದಾಗುತ್ತದೆ.

Image result for pooja for god

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=duHjeAlwQ8E